ಸ್ಯಾನ್ ಅಂಟೋನಿಯೋ
ಸ್ಯಾನ್ ಅಂಟೋನಿಯೋ ನಗರದ ಪ್ರಮುಖ ಆಕರ್ಷಣೆಗಳಲ್ಲಿ ರಿವರ್ ವಾಕ್ ತುಂಬಾ ಪ್ರಮುಖವಾದದ್ದು, ಸುಮಾರು 1937 ರಲ್ಲಿ ಶುರುವಾದ ಈ ರಿವರ್ ವಾಕ್ ಅನ್ನು ಟೆಕ್ಸಾಸ್ ನ ವೆನ್ನಿಸ್ ನಗರ ಎಂದೇ ಕರೆಯುತ್ತಾರೆ, ಸುಮಾರು 15 ಮೈಲಿಗಳಷ್ಟು ಉದ್ದಗಲವಿರುವ ರಿವರ್ ವಾಕ್ , ಸ್ಯಾನ್ ಅಂಟೋನಿಯೋ ನಗರದ ಡೌನ್ ಟೌನ್ ನಿಂದ ಹಿಡಿದು ಪ್ರಮುಖ ಪ್ರದೇಶಗಳಾದ ಆರ್ನೆಸೊನ್ ರಿವರ್ ಥಿಯೇಟರ್ , ಮ್ಯಾರೇಜ್ ಐಲ್ಯಾಂಡ್, ಲಾ ವಿಲಿಟಾ , ಟವರ್ ಲೈಫ್ ಬಿಲ್ಡಿಂಗ್ ಹೀಗೆ ಹಲವು ಪ್ರವಾಸಿಗರ ತಾಣಕ್ಕೆ ಸಂಪರ್ಕ ಒದಗಿಸುತ್ತದೆ, ರಿವರ್ ವಾಕ್ ಅನ್ನು ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಗುರುತಿಸಲಾಗಿದೆ ಹಗಲು ಹೊತ್ತು ಕೆರೆ ದಂಡೆಯ ಮೇಲಿನ ಸಾಲು ಸಾಲು ಅಂಗಡಿಯಂತೆ ಕಂಡರೆ, ಮುಸ್ಸಂಜೆಯಾಗುತ್ತಿದ್ದಂತೆ ಇಲ್ಲಿನ ವಾತಾವರಣ ಮತ್ತು ಚಿತ್ರಣ ಸಂಪೂರ್ಣವಾಗಿ ಬದಲಾಗುತ್ತದೆ, ಮದುವೆಯ ಆರತಕ್ಷತೆಯ ಮಂಟಪದಂತೆ ಮೈ ತುಂಬಾ ಝಗಮಗಿಸುವ ದೀಪಾಲಂಕಾರಗಳಿಂದ ಅಲಂಕಾರಗೊಳ್ಳುತ್ತದೆ,ನದಿಯ ಬದಿಯಲ್ಲಿ ರೆಸ್ಟೋರೆಂಟ್ ಗಳಲ್ಲಿ ಕುಳಿತು ವೈನ್ ಆಸ್ವಾದಿಸುತ್ತಿರುತ್ತಾರೆ, ಕೆಲವರು ತಮ್ಮ ಇಷ್ಟದ ಹಾಡುಗಳನ್ನು ಹಾಡುತ್ತಾ ನಡೆಯುತ್ತಿರುತ್ತಾರೆ, ಹದಿ ಹರೆಯದ ವಯಸ್ಸಿನ ತರುಣ ತರುಣಿಯರು ಯಾರೂ ನೋಡುತ್ತಿಲ್ಲ ವೇನೂ ಎಂಬಂತೆ ಸ್ವಾತಂತ್ರ್ಯವನ್ನು ಆಸ್ವಾದಿಸುತ್ತಾ ಕೈ ಕೈ ಹಿಡಿದು ಓಡಾಡುತ್ತಾರೆ. ಸಣ್ಣದಾದ ಹರಿಯುವ ನದಿ ತನ್ನ ಸುತ್ತಮುತ್ತಲ ಅಂಗಡಿಗಳ , ದೀಪಾಲಂಕಾರಗಳ , ದೇಶ ವಿದೇಶಗಳ ಪ್ರವಾಸಿಗರ ಅಲಂಕಾರವನ್ನು , ತ...