LOGOUT

ದಿನನಿತ್ಯ ಸೂರ್ಯ ಮುಳುಗೇಳುತ್ತಿದ್ದಾನೆ 

ಕಾಲ ಯಾರಿಗೂ ಕಾಯದೆ ಓಡುತ್ತಿದೆ 

ಭೂಮಿ ವಿಶ್ರಮಿಸದೇ ತಿರುಗುತ್ತಿದೆ 

ನಾವು ಮಾತ್ರ ಬಿಡಿಸಿಕೊಳ್ಳದ ಬಂಧನದಲ್ಲಿ ಸಿಲುಕಿದ್ದೇವೆ 


ಕಣ್ ಮುಚ್ಚಿ ತೆರೆಯುವಷ್ಟರಲ್ಲಿ ಹಗಲು ರಾತ್ರಿಯಾಗುತ್ತಿದೆ 

ನೋಡನೋಡುತ್ತಲೇ ವಾರ ತಿಂಗಳು ವರ್ಷಗಳುರುಳುತ್ತಿದೆ

ಬಾಲ್ಯ ಮುಗಿದು, ಹರೆಯ ದಾಟಿ, ಮುಪ್ಪು ಆವರಿಸುತ್ತಿದೆ  

ನಾವು ಮಾತ್ರ ಕೈಯಲ್ಲಿನ ಮಾಯಾಪೆಟ್ಟಿಗೆಯಲ್ಲಿ ಮುಳುಗಿದ್ದೇವೆ 


ಯಾರದ್ದೋ ಮದುವೆ, ಇನ್ಯಾರದ್ದೋ  ಮಧುಚಂದ್ರ 

ಯಾರದ್ದೋ  ಅನಿಸಿಕೆ, ಇನ್ಯಾರದ್ದೋ ಅಭಿಪ್ರಾಯ 

ಕಂಡಕಂಡವರ ಜಗಳಕ್ಕೆ ನಾವೇ ನ್ಯಾಯಾಧೀಶರು 

ಅಂತರ್ಜಾಲವೆಂಬ ಮಾಯಾಜಾಲದಲ್ಲಿ ಕಳೆದುಹೋಗಿದ್ದೇವೆ 


ಬಂಧನಗಳನ್ನು ಬಿಡಿಸಿಕೊಂಡು , ವಾಸ್ತವಕ್ಕೆ ಮರಳಬೇಕಿದೆ 

ಮುಳುಗಿರುವ ಮನಸ್ಸನ್ನು ಮೇಲೆತ್ತಬೇಕಿದೆ 

ಕಳೆದು ಹೋಗಿರುವ ನಮ್ಮ ತನವನ್ನು ಹುಡುಕಬೇಕಿದೆ 

ಸಾಮಾಜಿಕ ಜಾಲತಾಣಗಳಿಂದ ಇದೀಗಲೇ ಹೊರಬರಬೇಕಿದೆ 


                                                                                             - LSS


Comments

Popular posts from this blog

ಆಟ!!!

ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!

ಸ್ಯಾನ್ ಅಂಟೋನಿಯೋ