ಆಟ!!!

ಆತ ಸಿರಿವಂತನ ಮಗ, ಉದ್ಯಾನ ದಲ್ಲಿ 
ಮೊಬೈಲ್ ನಲ್ಲಿ ಆಟವಾಡುತ್ತ ಕುಳಿತ
ಈತ ಪೇಪರ್ ಆಯುವ ಹುಡುಗ,
ಆತನ ಬಳಿಗೆ  ಬಂದು ಕುಳಿತ 

ಬಣ್ಣ ಬಣ್ಣದ ಚಿತ್ತಾರ 
ಆಕರ್ಷಕ ವಿನ್ಯಾಸ 
ಪೂರ್ತಿಯಾಗಿ ಸೆಳೆಯುವoತ 
ಅದ್ಭುತ ಆಟವನ್ನು "ಅವ" ಆಡುತ್ತಿದ್ದ

ಕುತೂಹಲ , ಉತ್ಸುಕತೆ ಹೆಚ್ಚಾಗಿ 
"ಇವ" ಕೇಳಿದ , ಏನು ನೀ ಆಟವಾಡುತ್ತಿರುವುದು ಎಂದು 
"ಅವ" ಹೇಳಿದ,ನಿನಗೇನೂ ಅರ್ಥ ಆಗುವುದಿಲ್ಲ 
ಸರಿ ಆಚೆಗೆ , ಆಡಲು ಬಿಡು ನನ್ನ ಪಾಡಿಗೆ ಎಂದು

"ಅವ" ಹೇಳಲಿಲ್ಲ, "ಇವ" ಬಿಡಲಿಲ್ಲ , 
"ಅವ" ತೋರಿಸಲಿಲ್ಲ , "ಇವ" ಅಲ್ಲಿಂದ ಕದಲಲಿಲ್ಲ
"ಇವ"ನ ಆಸ್ಥೆಯ ನೋಡಿ, "ಅವ"ನಿಗೆ ಮನ ಕರಗಿ 
ತನ್ನ ಆಟ ತೋರಿಸುತ್ತ ಹೀಗೆ ಹೇಳಿದ

ಈ ಆಟದಲ್ಲಿ , ನಾ ಓಡುತ್ತಾ ಇರುತ್ತೇನೆ ,
ರಸ್ತೆಯಲ್ಲಿ ಸಿಗುವ ನಾಣ್ಯಗಳನ್ನು ಆಯುತ್ತೇನೆ ,
ದಾರಿಯಲಿ ಬರುವ ವಾಹನಗಳಿಂದ ತಪ್ಪಿಸಿಕೊಳ್ಳುತ್ತೇನೆ ,
ಹೆಚ್ಚು ನಾಣ್ಯ ಸಿಕ್ಕರೆ ಹೆಚ್ಚು ಊಟ ಸಿಗುತ್ತದೆ . ಇಷ್ಟೇ ಈ ಆಟ !

ಅದನ್ನು ಕೇಳಿ "ಇವ"ನೆಂದ, ಅರೇ , ನಾನು ಪ್ರತಿ ದಿನ ಇದೇ ಮಾಡುತ್ತೇನೆ ,
ರಸ್ತೆಯಲಿ ಸಿಗುವ ಪೇಪರ್ ಆಯುತ್ತೇನೆ 
ದಾರಿಯಲಿ ಬರುವ ವಾಹನಗಳಿಂದ ತಪ್ಪಿಸಿಕೊಳ್ಳುತ್ತೇನೆ
ಹೆಚ್ಚು  ನಾಣ್ಯ ಸಿಕ್ಕರೆ ಹೆಚ್ಚು ಊಟ ಸಿಗುತ್ತದೆ,

ಅವನಿಗೂ ಇವನಿಗೂ 
ಒಂದೇ ಒಂದು ವ್ಯತ್ಯಾಸವೆಂದರೆ 
"ಅವ",  ಆಟವನ್ನು ಮೊಬೈಲ್ ನಲ್ಲಿ ಆಡುತ್ತಿದ್ದ   
"ಇವ",  ತನ್ನ ನಿಜ ಜೀವನದಲ್ಲಿ ಆಡುತ್ತಿದ್ದ !!


                                                                     -LSS
              

Comments

Post a Comment

Popular posts from this blog

ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!

ಸ್ಯಾನ್ ಅಂಟೋನಿಯೋ