Posts

Showing posts with the label ಸಣ್ಣ ಕಥೆ

ಸ್ಯಾನ್ ಅಂಟೋನಿಯೋ

ಸ್ಯಾನ್ ಅಂಟೋನಿಯೋ ನಗರದ ಪ್ರಮುಖ ಆಕರ್ಷಣೆಗಳಲ್ಲಿ ರಿವರ್ ವಾಕ್ ತುಂಬಾ ಪ್ರಮುಖವಾದದ್ದು, ಸುಮಾರು 1937 ರಲ್ಲಿ ಶುರುವಾದ ಈ ರಿವರ್ ವಾಕ್ ಅನ್ನು ಟೆಕ್ಸಾಸ್ ನ ವೆನ್ನಿಸ್ ನಗರ ಎಂದೇ ಕರೆಯುತ್ತಾರೆ, ಸುಮಾರು 15 ಮೈಲಿಗಳಷ್ಟು ಉದ್ದಗಲವಿರುವ ರಿವರ್ ವಾಕ್ , ಸ್ಯಾನ್ ಅಂಟೋನಿಯೋ ನಗರದ ಡೌನ್ ಟೌನ್ ನಿಂದ ಹಿಡಿದು ಪ್ರಮುಖ ಪ್ರದೇಶಗಳಾದ ಆರ್ನೆಸೊನ್ ರಿವರ್ ಥಿಯೇಟರ್ , ಮ್ಯಾರೇಜ್ ಐಲ್ಯಾಂಡ್, ಲಾ ವಿಲಿಟಾ , ಟವರ್ ಲೈಫ್ ಬಿಲ್ಡಿಂಗ್ ಹೀಗೆ ಹಲವು ಪ್ರವಾಸಿಗರ ತಾಣಕ್ಕೆ ಸಂಪರ್ಕ ಒದಗಿಸುತ್ತದೆ, ರಿವರ್ ವಾಕ್ ಅನ್ನು ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಗುರುತಿಸಲಾಗಿದೆ ಹಗಲು ಹೊತ್ತು ಕೆರೆ ದಂಡೆಯ ಮೇಲಿನ ಸಾಲು ಸಾಲು ಅಂಗಡಿಯಂತೆ ಕಂಡರೆ, ಮುಸ್ಸಂಜೆಯಾಗುತ್ತಿದ್ದಂತೆ ಇಲ್ಲಿನ ವಾತಾವರಣ ಮತ್ತು ಚಿತ್ರಣ ಸಂಪೂರ್ಣವಾಗಿ ಬದಲಾಗುತ್ತದೆ, ಮದುವೆಯ ಆರತಕ್ಷತೆಯ ಮಂಟಪದಂತೆ ಮೈ ತುಂಬಾ ಝಗಮಗಿಸುವ ದೀಪಾಲಂಕಾರಗಳಿಂದ ಅಲಂಕಾರಗೊಳ್ಳುತ್ತದೆ,ನದಿಯ ಬದಿಯಲ್ಲಿ ರೆಸ್ಟೋರೆಂಟ್ ಗಳಲ್ಲಿ ಕುಳಿತು ವೈನ್ ಆಸ್ವಾದಿಸುತ್ತಿರುತ್ತಾರೆ, ಕೆಲವರು ತಮ್ಮ ಇಷ್ಟದ ಹಾಡುಗಳನ್ನು ಹಾಡುತ್ತಾ ನಡೆಯುತ್ತಿರುತ್ತಾರೆ, ಹದಿ ಹರೆಯದ ವಯಸ್ಸಿನ ತರುಣ ತರುಣಿಯರು ಯಾರೂ ನೋಡುತ್ತಿಲ್ಲ ವೇನೂ ಎಂಬಂತೆ ಸ್ವಾತಂತ್ರ್ಯವನ್ನು ಆಸ್ವಾದಿಸುತ್ತಾ ಕೈ ಕೈ ಹಿಡಿದು ಓಡಾಡುತ್ತಾರೆ. ಸಣ್ಣದಾದ ಹರಿಯುವ ನದಿ ತನ್ನ ಸುತ್ತಮುತ್ತಲ ಅಂಗಡಿಗಳ , ದೀಪಾಲಂಕಾರಗಳ , ದೇಶ ವಿದೇಶಗಳ ಪ್ರವಾಸಿಗರ ಅಲಂಕಾರವನ್ನು , ತ...

ಟರ್ಲಿಂಗುವಾ

  ಟರ್ಲಿಂಗುವಾ ಎಂಬುದು ದಕ್ಷಿಣ ಅಮೇರಿಕಾ ಹಾಗು ಮೆಕ್ಸಿಕೋ ನಡುವಿನ ಒಂದು ಸಣ್ಣ ಹಳ್ಳಿ, ಟರ್ಲಿಂಗುವಾ ಎಂದರೆ ಗಣಿಗಾರಿಕಾ ಪ್ರದೇಶ ಎಂದರ್ಥ, ಇಲ್ಲಿ 1880 ರ ಇಸವಿಯಲ್ಲಿ  ಪಾದರಸವನ್ನು ತಯಾರಿಸಲು ಬಳಸುವ ಸಿನ್ನಬಾರ್ಎಂಬ ಅದಿರಿನ ಗಣಿಗಾರಿಕೆ ವ್ಯಾಪಕವಾಗಿ ನಡೆದಿತ್ತು, ಆದರೆ 1940 ರಷ್ಟರಲ್ಲಿ ಅದಿರು ಖಾಲಿಯಾಗುತ್ತಾ ಹೋದಂತೆ ಒಬ್ಬೊಬ್ಬರಂತೆ ಜನರೂ ಬೇರೆಡೆಗೆ ಗುಳೆ ಹೊರಟರು, ನೋಡನೋಡುತ್ತ ಇಡೀ ಊರು ಖಾಲಿಯಾಗುತ್ತಾ ಹೋಯಿತು, ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಊರಿಗೆ ಘೋಸ್ಟ್ ಸಿಟಿ (ದೆವ್ವದ ಊರು) ಎಂಬ ಹೆಸರು ಬಂದಿತು. ಇಂದಿಗೂ ಅಮೇರಿಕಾದ ಬಹುತೇಕ ಊರುಗಳಿಗೆ ಹೋಲಿಸಿದರೆ ಈ ಘೋಸ್ಟ್ ಸಿಟಿ ಸ್ವಲ್ಪ ಹಿಂದುಳಿದಿದೆ ಎನ್ನಿಸುತ್ತದೆ, ಹತ್ತಿರದ ರಿಯೋ ಗ್ರಾಂಡೆ ಮತ್ತು ಬಿಗ್ ಬೆಂಡ್ ನೋಡಲು ಬರುವ ಪ್ರವಾಸಿಗರಿಂದ ಈ ಊರಿನಲ್ಲಿ ಅಲ್ಪ ಸ್ವಲ್ಪ ಜನ ಸಂಚಾರವಿದೆ.     ರಿಚರ್ಡ್ ತನ್ನ ಜೀವನದ ಮುಕ್ಕಾಲು ಭಾಗವನ್ನು ಇಲ್ಲಿಯೇ ಕಳೆದಿದ್ದ. ಒಂದು ಗ್ಯಾಸ್ ಸ್ಟೇಷನ್ ನಡೆಸುತ್ತಿದ್ದ, ಗ್ಯಾಸ್ ಸ್ಟೇಷನ್ ಎಂದರೆ ನಮ್ಮ ಊರುಗಳಲ್ಲಿರುವ ಕಿರಾಣಿ ರೀತಿಯ ಅಂಗಡಿ, ಜೊತೆಗೆ ೨ ಪೆಟ್ರೋಲ್ ಪಂಪು ಹೊಂದಿರುವ ಅಂಗಡಿ. ಹತ್ತಿರದಲ್ಲಿಯೇ ಮನೆ, ಮನೆಯಲ್ಲಿ ಪ್ರೀತಿಯ ಮಡದಿ, ತಾವು ಹೇಳಿದಂತೆ ಕೇಳಲು,  ಸಂತೋಷವಾದಾಗ ಮುದ್ದಾಡಲು, ಬೇಸರ ಕಳೆಯಲು ಬ್ರೂನೋ ಎಂಬ ಒಂದು ಮುದ್ದಾದ ನಾಯಿ ಸಾಕಿದ್ದರು . ಅಂಗಡಿಯ ವ್ಯ...

ತಿರುವು

ದಿನಾಂಕ ಸೆಪ್ಟೆಂಬರ್ 3 , ನನ್ನ ಜೀವನದ ಅತ್ಯಂತ ಕೆಟ್ಟ ದಿವಸ , ಸಮಯ ರಾತ್ರಿ ಸುಮಾರು 10.30 ಆಗಿತ್ತು , ದಟ್ಟವಾದ ಮೋಡ ಕವಿದು ಮೆಲ್ಲನೆ ಮಳೆ ಹನಿಯಲು ಶುರುವಾಗಿತ್ತು , ನನಗೆ ಅದಾಗಲೇ ಗೊತ್ತಿತ್ತು , ಮನೆಗೆ ಹೋದ ಮೇಲೆ ಏನೇನು ಮಾತನಾಡುತ್ತಾರೆ , ಹೇಗೆಲ್ಲ ಬೈಯುತ್ತಾರೆ ಅಂತ , ಮೊದಲೇ ನನ್ನ ಸ್ವಂತದ ತೊಂದರೆಗಳಿಂದ ತಲೆ ಕೆಟ್ಟು ಹೋಗಿತ್ತು . ನಮ್ಮ ಮನೆಯ ರಸ್ತೆಗೆ  ಬರುತ್ತಿದ್ದಂತೆ ನಮ್ಮ ರಸ್ತೆಯ ನಾಯಿ ಟೈಗರ್,  ಬಳಿಗೆ  ಓಡಿಬಂದಿತ್ತು , ಹೆಸರಿಗೆ ಮಾತ್ರ ಟೈಗರ್ ಆದರೆ ಒಣಕಲು ದೇಹ , ಪುಕ್ಕಲು ಸ್ವಭಾವ ಅದರ ಹೆಸರಿಗೆ ವಿರುದ್ಧವಾಗಿತ್ತು . ನಾನು ಮನೆಗೆ ಬರುವುದು ಖುಷಿ ಕೊಡುತ್ತಿದ್ದುದು ಅದಕ್ಕೆ ಮಾತ್ರ ಅನ್ನಿಸುತ್ತದೆ , ಪ್ರೀತಿಯಿಂದ ನನ್ನ ಬೈಕ್ ಹತ್ತಿರ ಬಂದು ಅದರದೇ ಭಾಷೆಯಲ್ಲಿ ನನ್ನ ಮಾತನಾಡಿಸುತ್ತಿತ್ತು. ಆದರೆ ಇಂದು ಅದನ್ನು ಮಾತನಾಡಿಸುವ ಅಥವಾ ಮುದ್ದಾಡುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ , ಅದರೆಡೆಗೆ ನೋಡಲು ಇಲ್ಲ , ನನ್ನ ಬೈಕ್ ನಿಲ್ಲಿಸಿ ಸೀದಾ ಮನೆಗೆ ಹೊರಟೆ ಅಮ್ಮ ಬಾಗಿಲು ತೆರೆದರು , ಸೀದಾ ಒಳಗಡೆ ಹೋಗಿ ಸೋಫಾ ಮೇಲೆ ಕುಳಿತುಕೊಂಡೆ , "ಊಟಕ್ಕೆ ಬಾರೋ " ಎಂದು ಕರೆದರು, ನಾನು "ಬೇಡ , ನನಗೆ ಹಸಿವಾಗಿಲ್ಲ " ಎಂದೆ ಅಷ್ಟೇ , ಅಲ್ಲಿಗೆ ಶುರುವಾಯಿತು "ದಿನಾ ಮನೆಗೆ ಬರುವುದು ರಾತ್ರಿ 10 ಆದ ಮೇಲೆಯೇ , ಕಾಲೇಜು ಮುಗಿಸಿಕೊಂಡು ಅದೆಲ್ಲಿಗೆ ಅಲಿಯೋಕೆ ಹೋಗುತ್ತಿಯೋ  ? ಇಲ್ಲಿ ನಿನಗ...