ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!
ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!
ಕಲ್ಲುಮುಳ್ಳಿನ ದಾರಿಯಲಿ ಪಯಣ ಕಷ್ಟವೆನಿಸುತ್ತಿದೆಯಾ?
ನಿನ್ನ ಭಾರವನು ಹಂಚಿಕೊಳ್ಳಲು ನಾವೆಲ್ಲಾ ಸಿದ್ಧರಾಗಿದ್ದೀವಿ
ದಾರಿಯಲಿ ಜಾರಿ ಕೆಳಗೆ ಬಿದ್ದಿರುವೆಯಾ?
ಕೈ ಚಾಚಿ ಮೇಲೆತ್ತಲು ನಾವೆಲ್ಲಾ ಕಾಯುತ್ತಿದ್ದೇವೆ
ಸಾಧನೆಯ ಶಿಖರವನ್ನೇರಿದರೂ, ಶೂನ್ಯಭಾವ ಕಾಡುತ್ತಿದೆಯಾ?
ನಿನ್ನ ಸಾಧನೆಯ ಸಂಭ್ರಮಿಸಲು ನಾವೆಲ್ಲಾ ಉತ್ಸುಕರಾಗಿದ್ದೇವೆ
ಎಲ್ಲರೊಟ್ಟಿಗಿದ್ದರೂ ಏಕಾಂತ ಕಾಡುತ್ತಿದೆಯಾ?
ಏಕಾಂತದ ಬಂಧನದಿಂದ ಬಿಡಿಸಿ, ನಿನ್ನ ಅಪ್ಪಿಕೊಳ್ಳಲು ಹಾತೊರೆಯುತ್ತಿದ್ದೀವಿ
ಯಾವುದೇ ಸಂಧರ್ಭದಲ್ಲಿಯೂ ನೀ ಮರೆಯಬೇಡ
ಜೀವನವೆಂಬ ಪಯಣದಲಿ ನಾವೆಲ್ಲಾ ಒಟ್ಟಿಗೆ ಇದ್ದೀವಿ !
-LSS
Comments
Post a Comment