ನನ್ನ ಪ್ರೀತಿಯ ಜೀವ ನೀನು
ನಿನ್ನ ಹೃದಯ ಬಡಿತ ಕೇಳಬಲ್ಲೆ ನಾನು
ನಿನ್ನ ಚಲನವಲನ ತಿಳಿಯಬಲ್ಲೆ ನಾನು
ನನ್ನ ಬದುಕನ್ನು ಬದಲಾಯಿಸಲು
ಹೊಸ ಅರ್ಥವ ಕೊಡಲು, ಬರುತ್ತಿರುವೆ ನೀನು
ನನ್ನ ಭವಿಷ್ಯದ ಭಾಗವಾಗಿರುವೆ ನೀನು
ಪ್ರತಿ ಆಲೋಚನೆಯ ಬಿಂದುವಾಗಿರುವೆ ನೀನು
ಏನೇನು ಸತ್ವಗಳು ಬೇಕೋ ಹೀರಿಕೋ ನೀನು
ನನ್ನ ದೇಹದ ಕಣ ಕಣದ ಹಕ್ಕುದಾರ ನೀನು
ನಾ ಮರವಾದರೆ, ಆಸರೆಯಲ್ಲಿ ಬೆಳೆಯುವ ಸಣ್ಣ ಸಸಿ ನೀನು
ನನ್ನೆಲ್ಲ ಒಳ್ಳೆ ಅಂಶಗಳ ಪಡೆದು, ಹೆಮ್ಮರವಾಗು ನೀನು
ಪೋಷಿಸುವೆ, ಕಾಪಾಡುವೆ ಪ್ರಾಣವಾದರೂ ನೀಡಿ ನಾನು
ಎಲ್ಲ ನೋವುಗಳು, ಎಲ್ಲ ಅಸ್ವಸ್ಥತೆಗಳ ಸಹಿಸಿಕೊಳ್ಳುವೆ ನಾನು
ಯಾರನ್ನು ದ್ವೇಷಿಸಬೇಕಿಲ್ಲ, ಯಾರಿಗೂ ಹೆದರಬೇಕಿಲ್ಲ ನೀನು
ನಿನಗಾಗಿ ಪ್ರೀತಿ ತುಂಬಿದ ಜಗತ್ತನ್ನು ಸೃಷ್ಟಿಸುವೆವು ನಾವು
ಹೊಸ ಜೀವವ ಸೃಷ್ಟಿಸುವ ಸಾಮರ್ಥ್ಯ ಕೊಟ್ಟಿರುವೆ ನೀನು
ಬದುಕಿನುದ್ದಕ್ಕೂ ಹೆಮ್ಮೆ ಪಡುವಂತಹ ಅವಕಾಶ ಕೊಟ್ಟಿರುವೆ ನೀನು
ಆರೋಗ್ಯವಾಗಿ, ಸಂತೋಷವಾಗಿ ಬೆಳವಣಿಗೆ ಹೊಂದು ನೀನು
ನಿನ್ನ ಭೇಟಿಯಾಗಲು ಕಾಯುತ್ತಿರುವೆ, ನನ್ನ ಪ್ರೀತಿಯ ಜೀವ ನೀನು
- ಲಾವಣ್ಯ. ಎಸ್.ಎಸ್
Comments
Post a Comment