ನಾ ಮರಳಬಹುದು....!!
ನಾ ಮರಳಬಹುದು ಮತ್ತೆ ನನ್ನ ಗೂಡಿಗೆ
ಬೆಚ್ಚಗಿನ ಪರಿಸರಕ್ಕೆ,ನಿರಾತಂಕ ಬದುಕಿಗೆ
ಸಾಮಾನ್ಯ ,ಸ್ವ ಇಚ್ಛೆಯ ಬದುಕಿಗೆ
ಏರಿಳಿತಗಳಿಲ್ಲದ ಸಮಸ್ಥಿತಿಗೆ
ನಾ ಮರಳಬಹುದು ಮತ್ತೆ ಭೂಮಿಯ ಹಂತಕ್ಕೆ
ಸೋಲಬಹುದು ಗುರುತ್ವಾಕರ್ಷಣೆಯ ಸೆಳೆತಕ್ಕೆ
ನೆಲದ ತೇವವ ಹೀರುತ್ತಾ ಬೇರುಗಳ ಚಾಚಬಹುದು ಪಾತಾಳಕ್ಕೆ
ನೆಮ್ಮದಿಯಿಂದ ತುಂಬಿರುವ ಪ್ರಪಂಚಕ್ಕೆ
ಸೂರ್ಯನ ಕಿರಣಗಳ ಎದುರಿಸುತ್ತಾ
ಗಾಳಿ ಮಳೆಯ ತೀವ್ರತೆಯ ಧಿಕ್ಕರಿಸುತ್ತಾ
ನನ್ನೆಲ್ಲಾ ಶಕ್ತಿಯ ಮೀರಿ ಬಾನಂಗಳದಿ ಮೇಲೇರುತ್ತಾ
ಸ್ವತಂತ್ರವಾಗಿ ಹಾರಾಡಲು ಬಯಸುತ್ತೇನೆ
ಬೇರುಗಳಿಂದ ಹೀರಿರುವ ಸತ್ವಗಳನ್ನು ಬಳಸುತ್ತಾ
ಎಲ್ಲಾ ಅಡೆತಡೆಗಳನ್ನು ಎದುರಿಸುತ್ತಾ
ಅಚಲವಾದ ತಾಳ್ಮೆಯಿಂದ ಶ್ರಮವಹಿಸುತ್ತಾ
ಬಾನೆತ್ತರಕ್ಕೆ ಬೆಳೆಯಲು ನಾ ಬಯಸುತ್ತೇನೆ
ಬೇಕಿದ್ದನ್ನು ಸಾಧಿಸಿದಮೇಲೆ
ಪ್ರಪಂಚವನ್ನು ತಿಳಿದಮೇಲೆ
ಮರಳುವೆ ಬೆಚ್ಚನೆಯ ಗೂಡಿಗೆ
ನೆಮ್ಮದಿಯಿಂದ ಶರಣಾಗುವೆ ಭೂಮಿಗೆ
-LSS
ಬೆಚ್ಚಗಿನ ಪರಿಸರಕ್ಕೆ,ನಿರಾತಂಕ ಬದುಕಿಗೆ
ಸಾಮಾನ್ಯ ,ಸ್ವ ಇಚ್ಛೆಯ ಬದುಕಿಗೆ
ಏರಿಳಿತಗಳಿಲ್ಲದ ಸಮಸ್ಥಿತಿಗೆ
ನಾ ಮರಳಬಹುದು ಮತ್ತೆ ಭೂಮಿಯ ಹಂತಕ್ಕೆ
ಸೋಲಬಹುದು ಗುರುತ್ವಾಕರ್ಷಣೆಯ ಸೆಳೆತಕ್ಕೆ
ನೆಲದ ತೇವವ ಹೀರುತ್ತಾ ಬೇರುಗಳ ಚಾಚಬಹುದು ಪಾತಾಳಕ್ಕೆ
ನೆಮ್ಮದಿಯಿಂದ ತುಂಬಿರುವ ಪ್ರಪಂಚಕ್ಕೆ
ಸೂರ್ಯನ ಕಿರಣಗಳ ಎದುರಿಸುತ್ತಾ
ಗಾಳಿ ಮಳೆಯ ತೀವ್ರತೆಯ ಧಿಕ್ಕರಿಸುತ್ತಾ
ನನ್ನೆಲ್ಲಾ ಶಕ್ತಿಯ ಮೀರಿ ಬಾನಂಗಳದಿ ಮೇಲೇರುತ್ತಾ
ಸ್ವತಂತ್ರವಾಗಿ ಹಾರಾಡಲು ಬಯಸುತ್ತೇನೆ
ಬೇರುಗಳಿಂದ ಹೀರಿರುವ ಸತ್ವಗಳನ್ನು ಬಳಸುತ್ತಾ
ಎಲ್ಲಾ ಅಡೆತಡೆಗಳನ್ನು ಎದುರಿಸುತ್ತಾ
ಅಚಲವಾದ ತಾಳ್ಮೆಯಿಂದ ಶ್ರಮವಹಿಸುತ್ತಾ
ಬಾನೆತ್ತರಕ್ಕೆ ಬೆಳೆಯಲು ನಾ ಬಯಸುತ್ತೇನೆ
ಬೇಕಿದ್ದನ್ನು ಸಾಧಿಸಿದಮೇಲೆ
ಪ್ರಪಂಚವನ್ನು ತಿಳಿದಮೇಲೆ
ಮರಳುವೆ ಬೆಚ್ಚನೆಯ ಗೂಡಿಗೆ
ನೆಮ್ಮದಿಯಿಂದ ಶರಣಾಗುವೆ ಭೂಮಿಗೆ
-LSS
Comments
Post a Comment