ಇಷ್ಟು ಸಾಕು !!!

ನಟ,ನಟಿಯರಿಗೆ ಅನಿವಾರ್ಯ ನಾಟಕೀಯ ಬದುಕು
ಮನಸ್ಸಿನ ಭಾವನೆಯ ಮನಸಲ್ಲೇ ನುಂಗಿ ನಗುವ ಬದುಕು

ರಾಜಕಾರಣಿಗಳಿಗೆ ಅನಿವಾರ್ಯ  ಮುಖವಾಡ ಧರಿಸುವ ಬದುಕು
ಭಾವನೆಗಳ ಬದಿಗಿಟ್ಟು ಅಧಿಕಾರಕ್ಕೆ ಹಾತೊರೆಯುವ ಬದುಕು

ವ್ಯಾಪಾರಿಗಳಿಗೆ ಅನಿವಾರ್ಯ ವ್ಯಾವಹಾರಿಕ ಬದುಕು
ಸುಖ ದುಃಖ ಗಳ ಹಣದ ರೂಪದಲಿ ಕೂಡಿಟ್ಟು ವ್ಯವಹರಿಸುವ ಬದುಕು

ನಾ ಕವಯಿತ್ರಿ ,ನನ್ನದು ಯಾವುದಕ್ಕೂ ಅನಿವಾರ್ಯ ವಿಲ್ಲದ ಬದುಕು
ಸುಖ ದುಃಖ ಹಂಚಿಕೊಳ್ಳಲು ಲೇಖನಿ ಹಾತೊರೆಯುತ್ತಿರಲು ಇನ್ನೇನು ಬೇಕು
ಭಾವನೆಗಳ ಬಿಂಬಿಸಲು ಪದಗಳು ಕಾತುರದಿಂದ ಕಾಯುತ್ತಿರಲು ಇನ್ನೇನು ಬೇಕು
ಮನದ ಇಂಗಿತವ ಕೇಳಲು ಕಾಗದ ಕಿವಿ ನಿಮಿರಿ ನಿಂತಿರಲು ಇನ್ನೇನು ಬೇಕು
ಸಂತಸವ ಸಂಭ್ರಮಿಸಲು ಕಾವ್ಯಾಸಕ್ತರು ಇದ್ದಾರೆ , ಈ ಬದುಕಿಗೆ ಇಷ್ಟು ಸಾಕು !!!


                                                                                                                       -LSS 

Comments

Popular posts from this blog

ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!

LOGOUT

ಸ್ಯಾನ್ ಅಂಟೋನಿಯೋ