ಬದುಕು.... !
ಕೋಣೆಯ ಬಾಗಿಲನು ಭದ್ರ ಮಾಡಿ
ತನ್ನ ತಾನು ಅಡಗಿಸಿಡುವುದು ಬದುಕಲ್ಲ
ಮನಸ್ಸಿನ ಬಾಗಿಲನು ಭದ್ರ ಮಾಡಿ
ಸಲ್ಲದವರನು ಸೇರಿಸದಿರುವುದು ಬದುಕು
ನಮ್ಮ ಭಾವನೆಗಳ ಬೇರೆಯವರ ಕಾಲಡಿಗೆ ಹಾಕಿ
ತುಳಿಯದಂತೆ ಬೇಡುವುದು ಬದುಕಲ್ಲ
ಭಾವನೆಗಳ ಗುಚ್ಛಮಾಡಿ ಯಾರಿಗೂ ಸಿಗದಂತೆ
ಯಾರೂ ಕೆಡವದಂತೆ ನೋಡಿಕೊಳ್ಳುವುದು ಬದುಕು
ಕಂಡ ಕಂಡವರ ಮಾತನು ಮನಸಿನಾಳಕೆ ಬಿಟ್ಟು
ತನ್ನ ತನವ ಮರೆತು ಕೊರಗುವುದು ಬದುಕಲ್ಲ
ತನ್ನ ತಾನು ಅರಿಯುತ್ತಾ ಪ್ರೀತಿಸುತ್ತಾ
ಶಾಂತವಾದ ಮೌನಕ್ಕೆ ಶರಣಾಗುವುದು ಬದುಕು
-LSS
Comments
Post a Comment