ಈ ಹೊತ್ತಿನ ತಲ್ಲಣ


ವಿದ್ಯುತ್ಕಾಂತೀಯ ಸಂಕೋಲೆಗಳಿಂದ ಬಿಡಿಸಿಕೊಳ್ಳಲಾಗದೆ ಕೊರಗುತ್ತಿದ್ದೇವೆ 
ಕ್ಷಣಕ್ಷಣಕ್ಕೂ  ಜೀವನದ  ಸೌಂದರ್ಯ ಮರೆತು ಬರಡು ಬಾಳು ಬದುಕುತ್ತಿದ್ದೇವೆ 
ನಮ್ಮೆಲ್ಲಾ ಮೌಲ್ಯಗಳನ್ನು,ಮನುಷ್ಯತ್ವವನ್ನು ಮರೆತು ಯಂತ್ರಗಳಾಗುತ್ತಿದ್ದೇವೆ 
ತರಂಗಾಂತರಗಳ ಕಿರಣಗಳನ್ನು ನೋಡುತ್ತಾ ಇದೇ ಹೊತ್ತಿನ ತಲ್ಲಣ ಎಂದು ನಿಂತಿದ್ದೇವೆ  

ಹಸಿದ ಮಗುವಿಗೆ ಊಟ ನೀಡಲು  ತಾಯಿಗೆ ಸಮಯವಿಲ್ಲ 
ವಯಸ್ಸು ಮೀರಿದ ಮನಸ್ಸುಗಳನ್ನು ಮಾತನಾಡಿಸಲು ಪುರುಸೊತ್ತಿಲ್ಲ 
ಊರು ಕೇರಿಯವರ ಪರಿಚಯವಿಲ್ಲ , ಪ್ರಾಣಿ ಪಕ್ಷಿಗಳಂತೂ ನೆನಪೇ ಇಲ್ಲ 
ಅಸ್ವಾಭಾವಿಕ ಸಮಾಜ ಮಧ್ಯೆ ತಲ್ಲಣಿಸುತ್ತಿರುವವನಿಗೆ ಜೀವನದ ಕುರುಹೇ ಇಲ್ಲ 

ದೇವಸ್ಥಾನಕ್ಕೆ ಹೋಗುವುದು "ಸೆಲ್ಫಿ" ಗಾಗಿ , ದರುಶನಕ್ಕಲ್ಲ 
ಊಟ ಮಾಡುವುದು ಫೇಸ್ ಬುಕ್ ಗಾಗಿ , ಹೂಟ್ಟೆಪಾಡಿಗಲ್ಲ 
ಸಾಧನೆ ,ಬೇರೆಯವರ ತೋರಿಕೆಗಾಗಿ ಆತ್ಮ ತೃಪ್ತಿಗಲ್ಲ 
ಒಂದಲ್ಲ ಒಂದು ದಿನ ವಿದ್ಯುತ್ ಇರದಿದ್ದರೆ ? ಎಂಬ ತಲ್ಲಣ ಕಾಡುತ್ತಿದೆಯಲ್ಲ 

ಕೈಯಲ್ಲಿ ದೂರವಾಣಿ , ಸ್ವಲ್ಪ ದೂರದಲ್ಲೇ ಗಣಕಯಂತ್ರವೊಂದು 
ತೊಡೆಯಮೇಲೊಂದು , ಅಲ್ಲೇ ಬೆಂಚಿನ ಮೇಲೆ ಮತ್ತೊಂದು  
ಕತ್ತಿನ ಸುತ್ತ ಹಾಡುವ ಯಂತ್ರ , ಕೈಯಲ್ಲಿ ಹೃದಯ ಬಡಿತ ತೋರಿಸುವ ಯಂತ್ರವೊಂದು 
ನಮ್ಮ ಹೆಜ್ಜೆ ಹೆಜ್ಜೆಯನು ಯಾರೋ ದಾಖಲಿಸುತ್ತಿದ್ದಾರೆ ಎಂಬ ತಲ್ಲಣ ಮನದಲ್ಲಿಂದು 

ಹಿಂದೊಮ್ಮೆ ಅಂದುಕೊಂಡಿದ್ದೆವು , ದೇವರಿದ್ದಾನೆ ಕಾಯುವವನು ಅವನೇ,
ನಿಯಂತ್ರಿಸುವವನು ಅವನೇ , ನಮ್ಮೆಲ್ಲ ಆಗುಹೋಗುಗಳ ಗಮನಿಸುವವನು ಅವನೇ 
ಇಂದೀಗ ತಲ್ಲಣವಾಗುತ್ತಿದೆ ,ದೊಡ್ಡ ಕಂಪನಿಯ ಸಾಹುಕಾರರಿದ್ದಾರೆ 
ಕಾಯುವವರು,ನಿಯಂತ್ರಿಸುವವರು ಅವರೇ ,ಆಗುಹೋಗುಗಳ ಗಮನಿಸುವವರು ಅವರೇ 

ಒಂದು ದಿನ ಬರಬಹುದು , ಬೆಳಗೆದ್ದು ನೋಡಿದರೆ ಮರ ಗಿಡಗಳಿಲ್ಲ ,ಪ್ರಾಣಿ ಪಕ್ಷಿಗಳಿಲ್ಲ
ಸಂಬಂಧ ಸಹಚರರ ಸುಳಿವಿಲ್ಲ , ಭಾವನೆಗಳಿಲ್ಲ ಬಂದುಗಳಿಲ್ಲ ಯಂತ್ರ ಮಾನವರೇ ಎಲ್ಲ 
ಯಾವುದೋ ಯಂತ್ರದ ಯಾವುದೋ ತಂತ್ರದ ಬಲಿಪಶುವಾಗಿ ತಲ್ಲಣಿಸುವೆವು ನಾವೆಲ್ಲಾ 
ತಾವೇ ಸೃಷ್ಟಿಸಿದ ತರಂಗಗಳ ಆರ್ಭಟಕ್ಕೆ ಬಲಿಯಾಗಿ ಹೋಗುವುದು ಮನುಕುಲವೆಲ್ಲ 

ಸ್ವಲ್ಪ ಸಡಲಿಸೋಣ ಯಂತ್ರಗಳ ಕೊಂಡಿಯನ್ನು 
ಮತ್ತೆ ಮಗುವಂತೆ ಬೆರಗುಗಣ್ಣಲಿ ನೋಡೋಣ ಜೀವನವನ್ನು 
ಸ್ವಾಭಾವಿಕವೇ ಸಂತಸ , ಸ್ವಾಭಾವಿಕವೇ ಶಾಶ್ವತವು 
ತರಂಗಾಂತರಗಳ ಬಂಧನದ  ಹೊತ್ತಿನ ತಲ್ಲಣವನು ಇಲ್ಲಿಯೇ ಅಂತ್ಯಗೊಳಿಸೋಣ 



                                                                                                                            -LSS
  

Comments

Popular posts from this blog

ಆಟ!!!

ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!

ಸ್ಯಾನ್ ಅಂಟೋನಿಯೋ