ಕಂಪನಿಯ ಕಥೆ... !
ಬಿಡಿಸಿಕೊಂಡು ಹೋಗುವ ಹಾಗಿರಲಿಲ್ಲ , ಅಲ್ಲೇ ಕೂರಲು ಮನಸ್ಸಾಗುತ್ತಿಲ್ಲ
ಮುಂದೆ , ಹಿಂದೆ ಅಕ್ಕ ಪಕ್ಕ ಎಲ್ಲೆಲ್ಲೂ ಮೈ ಗೆ ಮೈ ತಾಗಿಸಿ ವಾಹನಗಳು ನಿಂತಿತ್ತು
ಹವಾನಿಯಂತ್ರಿತ ವಾಹನವಾದರೂ , ವಿಚಿತ್ರ ಹಿಂಸೆ ಆಗುತ್ತಿತ್ತು
ಆಡಿದ್ದೇ ಮಾತುಗಳು ಮತ್ತೆ ಮತ್ತೆ , ಕೇಳಿದ್ದೇ ಹಾಡುಗಳು ಮತ್ತೆ ಮತ್ತೆ ಬರುತ್ತಿತ್ತು
ಹೊರಗಿನ ಗಾಳಿ ಒಳ ಬರಲು ಸಾಧ್ಯವಿಲ್ಲ , ಒಳಗಿನ ಗಾಳಿ ಹೊರ ಹೋಗುವುದಿಲ್ಲ
ಅವರವರ ಉಸಿರು ಅವರಿಗೇ ಮತ್ತೆ ಮತ್ತೆ ಹಂಚಿಕೆಯಾಗುತ್ತಿತ್ತು
ಒಂದು ದಿನದ ಕಥೆಯಲ್ಲ , ಪ್ರತಿ ದಿನದ , ಪ್ರಯಾಣದ ವ್ಯಥೆಯಾಗಿತ್ತು
ಉಳಿತಾಯ ಖಾತೆಯಲ್ಲಿ ಹಣ ತುಂಬಿದ್ದರೂ, ಕಿಂಚಿತ್ತು ಸಂತಸವಿರಲಿಲ್ಲ
ಜೀವನದಲ್ಲಿ ಜಿಗುಪ್ಸೆ , ಸಾಕಾಯ್ತು ಬದುಕು ಎನ್ನುತ್ತಾ ಕುಡಿಯಲು ಕುಳಿತ ಕೋಟ್ಯಾಧೀಶನೊಬ್ಬ
ಮೇಲಧಿಕಾರಿಯ ಜೊತೆಯಲ್ಲಿ ಕುಡಿದರೆ ತನಗೆ ಲಾಭವಾದೀತೆಂದು , ಕುಡಿಯಲು ಕುಳಿತ ಅಮಾಯಕ ಹೊಸಬ
ಬಡ್ತಿಯ ಕನಸು , ಸಂಬಳದ ಆಸೆಯಿಂದ ಸುಮ್ಮನೆ ನಗುತ್ತಾ ನಿಂತಿದ್ದ ಹಳ್ಳಿಯ ಹುಡುಗಿ
ಕೆಲವರ ಬದುಕು ಬದಲಾಗುತ್ತಿತ್ತು , ಕೆಲವರ ಬದುಕು ಹಾಳಾಗುತ್ತಿತ್ತು
ಸಾಲಗಳು ತೀರುತ್ತಿತ್ತು , ತಂಗಿಯ ಮದುವೆ, ತಂದೆಯ ಜವಾಬ್ದಾರಿ
ಸ್ವಂತದ ಮನೆ , ಹೀಗೆ ಕನಸುಗಳು ನನಸಾಗುತ್ತಿತ್ತು
ಒಳ್ಳೆಯದ್ದು ,ಕೆಟ್ಟದ್ದು ,ಹೀಗೆ ಎರಡನ್ನು ತುಂಬಿಕೊಂಡು ಕಂಪನಿ ಮುನ್ನುಗ್ಗುತ್ತಿತ್ತು
-LSS
Comments
Post a Comment