ಪುಟ್ಟಕ್ಕ ಮತ್ತು ಅಪ್ಪಯ್ಯ ...


ತಂದೆ ಮಗಳಿಬ್ಬರೂ ಸುದ್ದಿನೋಡುತ್ತಾ ಕುಳಿತರು,
ಸಾಲು ಸಾಲು ರೈತರ ಸಾವಿನ ಸುದ್ದಿ ,
ಊಹೆ ಇಲ್ಲದೆ ಪಡೆದ , ಹಿಂದಿರುಗಿಸಲಾರದ ಸಾಲದ ಸುದ್ದಿ 
ಸತ್ತವರ ಸಂಖ್ಯೆ ನೂರು ದಾಟಿದರು , ಏನೂ ಮಾಡದ ಸರ್ಕಾರದ ಸುದ್ದಿ 

ಪುಟ್ಟಕ್ಕ ಟೀವಿ ಆರಿಸುತ್ತ ಹೇಳಿದಳು 
ಇವರಿಗೆಲ್ಲ ಬುದ್ದಿಯಿಲ್ಲವೇನು ?
ಒಮ್ಮೆ ನಷ್ಟ ವಾದರೆ , ಮತ್ತೊಂದು ಬೆಳೆಯುಂಟು ,
ಒಂದು ಸಾಲ ತೀರಿಸಲು ಮತ್ತೊಂದು ಮಾಡಿದರಾಯಿತು 

ಅಪ್ಪಯ್ಯ ಅಸಹಾಯಕತೆಯಿಂದ ಹೇಳಿದರು ,
ಸಮಸ್ಯೆ ಇಷ್ಟು ಸಣ್ಣದಿದ್ದರೆ, ನೂರು ಮಂದಿ ಸಾಯುತ್ತಿರಲಿಲ್ಲ 
ಊಹೆಗೆ ಮೀರಿದ ಸಾಲವ ಪಡೆದಿರುವೆನು ,
ಜೀವ ಪೂರ್ತಿ ಜೀತ ಮಾಡಿದರು ಸಾಲ ತೀರಿಸಲಾರೆನು 

ಬದುಕಿದ್ದರೆ ಇರುವ ಒಂದು ಜಮೀನನ್ನು ಒತ್ತುವರಿ ಮಾಡುವರು 
ನಾ ಸತ್ತರೆ ಬಹುಷಃ ಸಾಲ ಮನ್ನ ಮಾಡುವರು 

ಬೆಳೆದ ಬೆಳೆ ನನ್ನ ಪಾಲಿಗೆ ವಿಷವಾಯಿತು ,
ನಂಬಿದ್ದ ದಣಿಗಳು ಎದುರಾಳಿಯಾದರು 
ಇನ್ನು ದುಡಿಯಲು ನಾ ಅಶಕ್ತನಾಗಿರುವೆನು ,
ಜೀವನದ ಆಸೆ ಪೂರ್ತಿ ಕಳೆದುಕೊಂಡಿರುವೆನು 

ಪುಟ್ಟಕ್ಕನಿಗೆ ಭಯ ಶುರುವಾಯಿತು ,
ತನ್ನ ಮನೆಯ , ತನ್ನ ತಂದೆಯ ಸ್ಥಿತಿ ಅರಿವಾಯಿತು 
ಅಪ್ಪಯ್ಯನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು 
ನನ್ನ ಬಿಟ್ಟು ಹೋಗಬೇಡ ಎಂದು ಅತ್ತು ಗೋಳಾಡಿದಳು  

ಆತ್ಮಹತ್ಯೆಯ ಬಿಟ್ಟು ಬೇರೆ ದಾರಿಯಿಲ್ಲ ನನಗೆ ಎನ್ನುತ್ತಾ ,ಅಪ್ಪಯ್ಯ ,
ಮನೆಯ ಮಾಳಿಗೆಗೆ ಹಗ್ಗ ಬಿಗಿದರು .... 


                                                        -LSS

Comments

Post a Comment

Popular posts from this blog

ಆಟ!!!

ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!

ಸ್ಯಾನ್ ಅಂಟೋನಿಯೋ