ಜೀವ ಸುಡುತ್ತಿತ್ತು , ಹೊಗೆಯಾಡುತ್ತಿತ್ತು ...
ಶೋಕಿಗೆ , ಒತ್ತಡಕ್ಕೆ , ಒಳ್ಳೆ ಆಲೋಚನೆಗಳಿಗೆ
ಒಂದೇ ಮದ್ದು , ಸಿಗರೇಟು ಎಂಬ ಭಾವನೆ ಅವನಲ್ಲಿತ್ತು
ಶ್ವಾಸಕೋಶಗಳ ದಾಟಿ , ಉಸಿರನ್ನು ನೂಕಿ
ಧೂಮಪಾನದ ಹೊಗೆಯು ದೇಹವನ್ನಾವರಿಸಿತ್ತು
ದರ್ಪದಿಂದಲಿ ಒಂದೊಂದೇ ಉಸಿರನ್ನು ಎಳೆದು ಹೊಗೆಯ ಬಿಡುತ್ತಿದ್ದ
ಒಂದೊಂದು ಉಸಿರಿನ ಜೊತೆಗೂ ಕೋಟಿ ಕಲ್ಮಶಗಳ ದೇಹಕ್ಕೆ ಸೇರಿಸುತ್ತಿದ್ದ
ಅವನoದುಕೊಂಡ ಸಿಗರೇಟು ಸುಡುತ್ತಿತ್ತು
ಹಾಗಾಗಿ ಹೊಗೆಯಾಡುತ್ತಿತ್ತು ,
ವಾಸ್ತವದಲ್ಲಿ ಒಳಗೊಳಗೇ ಜೀವ ಸುಡುತ್ತಿತ್ತು
ಹಾಗಾಗಿ ಹೊಗೆಯಾಡುತ್ತಿತ್ತು
ಗರ್ವದಿoದಲಿ, ಮುಗಿದ ಸಿಗರೇಟನ್ನು ತುಳಿದು
ಹೊಸಕಿ ಹಾಕಿದ
ವಾಸ್ತವದಲ್ಲಿ ಧೂಮಪಾನದ ಹೊಗೆಯು
ಅವನ ಉಸಿರನ್ನೇ ಹೊಸಕಿಹಾಕಿದ್ದವು
ಶೋಕಿಗಾಗಿ ಶುರುವಾಗಿದ್ದು , ಅಭ್ಯಾಸವಾಗಿ
ಕೊನೆಗೆ ಚಟವಾಯಿತು
ಅರಿವಿಲ್ಲದಂತೆ ಅವನನ್ನು ಪೂರ್ತಿಯಾಗಿ
ಆವರಿಸಿತ್ತು
ಕೆಲವೇ ವರ್ಷಗಳಲ್ಲಿ ದೇಹ
ರಾಸಾಯನಿಕಗಳ ರಾಶಿಯಾಗಿತ್ತು
ಸ್ವಚ್ಛ ಉಸಿರಿಲ್ಲದೆ ಜೀವಕಣಗಳು
ಅಸುನೀಗಿತ್ತು
ಕೊನೆಗೊಂದು ದಿನ , ಮಲಗಿದ್ದ ಜಾಗದಲ್ಲೇ ಜೀವ ಹೋಗಿತ್ತು
ಸ್ಮಶಾನದಲಿ ಅಂದು ಜೀವ ಸುಡುತ್ತಿತ್ತು ,ಹಸಿ ಕಟ್ಟಿಗೆಯ ಹೊಗೆಯಾಡುತ್ತಿತ್ತು
-LSS
Comments
Post a Comment