ಹುಚ್ಚು ಕನಸು



ದುಡಿದು ದಣಿವಾಗಿದ್ದ ದೇಹಕ್ಕೆ 
ಹೊಟ್ಟೆ ತುಂಬಾ ಆಹಾರ ಸಿಕ್ಕಿತ್ತು 
ಉಂಡು ಮಲಗಿದ ಮರುಕ್ಷಣವೇ 
ಕನಸೊಂದು ಆವರಿಸಿತ್ತು 

ಕನಸಲ್ಲಿ ಹೆಚ್ಚೇನಿರಲಿಲ್ಲ 
ನಾಯಿಯೊಂದು ಅಟ್ಟಿಸಿ ಕೊಂಡು ಬರುತ್ತಿತ್ತು 
ಇವ , ಶಕ್ತಿ ಯನ್ನೆಲ್ಲಾ ಮೀರಿ ಓಡುತ್ತಿದ್ದ 
ಹೆದರಿ ,ಬಳಲಿ ,ಬೇಸತ್ತರೂ ಬಿಡಲಿಲ್ಲ 

ಆಗಾಗ ಅವನಿಗೆ ಅದೇ ಕನಸು ಬೀಳುತ್ತಿತ್ತು 
ಅದೇ ರಸ್ತೆ , ಅದೇ ನಾಯಿ 
ಅದೇ ವೇಗ , ಅದೇ ಕಾಲಿನ ಶಕ್ತಿ 
ಅವನಿಗೆ ಕನಸು ಬಿದ್ದಾಗಲೆಲ್ಲಾ ಅದೇನೋ ಆನಂದ 

ಯಾರೋ ಬಾಗಿಲು ಬಡಿದರು 
ನಿದ್ದೆಯಿಂದ ಎಚ್ಚರವಾಯಿತು 
ಬಾಗಿಲನು ತೆರೆಯಲು ಹೊರಟ , ಆಗಲಿಲ್ಲ 
ಸ್ವಾದೀನವಿಲ್ಲದ ಕಾಲುಗಳು ಸಹಕರಿಸಲಿಲ್ಲ 

ಕಾಲುಗಳನ್ನು ಕಳೆದುಕೊಂಡು ವರುಷಗಳೇ ಕಳೆದಿತ್ತು 
ತೆವಳುತ್ತ , ಕುಂಟುತ್ತಾ ಜೀವನ ಸಾಗುತ್ತಿತ್ತು 
ಕನಸಿನಿಂದ ಹೊರಬಂದು ವಾಸ್ತವತೆಯ ಅರಿತನು 
ತನ್ನ ಹುಚ್ಚು ಕನಸಿಗೆ ತಾನೇ ಮುಗುಳ್ನಗೆ ಬೀರಿದನು 
       


                                                                             -LSS



Comments

Post a Comment

Popular posts from this blog

ಆಟ!!!

ಜೀವನವೆಂಬ ಪಯಣದಲಿ, ನಾವೆಲ್ಲಾ ಒಟ್ಟಿಗೆ ಇದ್ದೀವಿ!

ಸ್ಯಾನ್ ಅಂಟೋನಿಯೋ