ಮದ್ಯ - ಪ್ರಯಾಣ
ಮದ್ಯ - ಪ್ರಯಾಣ
ಗೆಳೆಯನ ಸಂಭ್ರಮಾಚರಣೆಯ ಕಾರಣವಾಗಿ
ಹೊರಟೆನು ಪಂಚತಾರಾ ಹೋಟೇಲಿನ ಕಡೆಗೆ
ಮಗಳು ಬಾಗಿಲ ಬಳಿ ಬಂದು ಹೇಳಿದಳು
"ಅಪ್ಪ ನನ್ನ ಬಿಟ್ಟು ಹೋಗಬೇಡ" ಎಂದು ,
ಹಾಲು ಕುಡಿಯುವ ಮುಗ್ಧ ಮಗುವನ್ನು
ಹೇಗೆ ಕರೆದೊಯ್ಯಲಿ ಮಾಂಸ ಮದ್ಯದ ಕೂಟಕ್ಕೆ,
ನೀ ಒಳಗೆ ಹೋಗು , ನಾ ಈಗಲೇ ಬರುವೆ ಎಂದು
ಪ್ರೀತಿಯಿಂದ ಮುತ್ತಿಟ್ಟು ,ವಾಹನವೇರಿ ಹೊರಟೆ
ಬೀರು , ಬ್ರಾಂಡಿಯ ಘಾಟು ವಾಸನೆಯಲ್ಲಿ
ನಶೆ ಯೇರಿಸುವ ಮಬ್ಬು ಗತ್ತಲಿನಲ್ಲಿ
ಸ್ತ್ರೀ ಪುರುಷರೆಂಬ , ಬೇಧ ಭಾವವಿರಲಿಲ್ಲ ಅಲ್ಲಿ
ಹಾಗೂ ,ಹೀಗೂ ,ಧೂಮಪಾನದ ದಟ್ಟ ಹೊಗೆಯ ಭೇದಿಸಿ ಒಳನಡೆದೆ
ಕೆಲವರಿಗೆ ಅದಾಗಲೇ ಏರಿತ್ತು ,
ಕೆಲವರು ವೇದಿಕೆಯ ಮೇಲೇರಿ ಕುಣಿಯುತ್ತಿದ್ದರು
ನಾನು ಏರಿಸಿಕೊಳ್ಳುವ ಆಸೆಯಿಂದ ಹೀರಲು ಕುಳಿತೆ ,
ಒಂದರ ನಂತರ , ಮತ್ತೊಂದು , ಇನ್ನೊಂದು ಹೀಗೆ ಸಾಗಿತು ನಿರಂತರವಾಗಿ
ನಶೆ ಎಂಬುದು ಏರಿತ್ತು ,ಅಚಾತುರ್ಯಗಳ ಮಾಡಲು ಪರವಾನಗಿ ಸಿಕ್ಕಿತ್ತು
ಯಾರದೋ ಗೆಳತಿ , ಇನ್ಯಾರದೋ ಹೆಂಡತಿ ,ಯಾವುದೋ ಹಾಡು , ಇನ್ಯಾವುದೋ ನೃತ್ಯ
ವೇದಿಕೆಯ ಮೇಲೆರಿ ಕುಣಿದೆ, ಅರಚಿದೆ, ಕಿರುಚಿದೆ
ಸಭ್ಯ ಯುವಕನಾಗಿ ಬಂದವನು , ಎಲ್ಲ ಎಲ್ಲೆ ಗಳ ಮೀರಿ ವರ್ತಿಸಿದೆ
ಅದಾಗಲೇ ಮಧ್ಯ ರಾತ್ರಿ ಯಾಗಿತ್ತು
ಮನೆಗೆ ಹೋಗುವ ಮನಸ್ಸಾಯಿತು
ರಕ್ತದ ಕಣ ಕಣ ದಲ್ಲೂ , ನಶೆ ತುಂಬಿಕೊಂಡು
ಹೊರಟೆ ನನ್ನ ವಾಹನ ವೇರಿ
ಕಣ್ಣ ದೃಷ್ಟಿಯು ಮಂಕಾಗಿತ್ತು ,ರಸ್ತೆ ಅಸ್ಪಷ್ಟವಾಗಿತ್ತು
ದಾರಿ ಕಂಡಂತೆ ಸಾಗತೊಡಗಿದೆ,
ದೂರದಲ್ಲೊಂದು ಪ್ರಖರ ಬೆಳಕು ನನ್ನೆಡೆಗೆ ಬರುತ್ತಿತ್ತು
ತನ್ನ ಉಜ್ವಲ ಬೆಳಕಿನಿಂದ ನನ್ನ ಆಕ್ರಮಿಸುತ್ತಿತ್ತು
ಇನ್ನು ಹತ್ತಿರ ಹತ್ತಿರ ಬರತೊಡಗಿತ್ತು ,
ನಾ ಮಂತ್ರ ಮುಗ್ಧನಾಗಿ ಅದರೆಡೆಗೆ ನೋಡುತ್ತಿದ್ದೆ
ವೇಗ ನಿಯಂತ್ರಿಸಲಾಗಲಿಲ್ಲ , ವಾಹನ ಬೇರೆಡೆಗೆ ತಿರುಗಿಸಲಾಗಲಿಲ್ಲ
ಒಂದೇ ಕ್ಷಣದಲ್ಲಿ ಆ ವಾಹನ ನನ್ನ ಮೇಲೆ ಹರಿದಿತ್ತು
"ಅಪ್ಪ ನನ್ನ ಬಿಟ್ಟು ಹೋಗಬೇಡ" ಎಂದಿದ್ದ ಮಗಳ ಮಾತು
ಕಿವಿಯಲ್ಲಿ ಪ್ರತಿಧ್ವನಿಸಿತ್ತು
ನೋಡ ನೋಡುತ್ತಿದ್ದಂತೆ ರಸ್ತೆ ಮಧ್ಯದಲ್ಲೇ
ಪ್ರಾಣ ಹೋಗಿತ್ತು ...
- LSS
nice one Lavanya
ReplyDeletethank you :)
DeleteThis comment has been removed by a blog administrator.
ReplyDelete